ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಯುವಕ-ಯುವತಿಯರಿಗೆ ಭಾರತೀಯ ಅಂಚೆ ಇಲಾಖೆ (India Post Recruitment 2026) ಭರ್ಜರಿ ಗುಡ್‌ನ್ಯೂಸ್ ನೀಡಿದೆ. ದೇಶಾದ್ಯಂತ ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಬರೋಬ್ಬರಿ 28,740 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆ ಅಧಿಸೂಚನೆ ಹೊರಡಿಸಿದೆ.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲದೆ, ಕೇವಲ ಹತ್ತನೇ ತರಗತಿಯ ಅಂಕಗಳ ಆಧಾರದ ಮೇಲೆ (Merit Basis) ನೇರ ನೇಮಕಾತಿ ನಡೆಯಲಿದೆ ಎಂಬುದು ಇದರ ವಿಶೇಷ. ಕರ್ನಾಟಕದ ಅಭ್ಯರ್ಥಿಗಳಿಗೆ ರಾಜ್ಯದಲ್ಲೇ ಕೆಲಸ ಮಾಡಲು 1,135 ಹುದ್ದೆಗಳು ಲಭ್ಯವಿದ್ದು, ಇದು ಸ್ಥಳೀಯರಿಗೆ ಸಿಕ್ಕಿರುವ ಸುವರ್ಣಾವಕಾಶವಾಗಿದೆ.
India Post Recruitment 2026 ಸಂಕ್ಷಿಪ್ತ ವಿವರ:
- ಸಂಸ್ಥೆಯ ಹೆಸರು: ಭಾರತ ಅಂಚೆ ಇಲಾಖೆ (India Post)
- ಹುದ್ದೆಯ ಹೆಸರು: ಗ್ರಾಮೀಣ ಡಾಕ್ ಸೇವಕ್ (GDS) – ABPM/Dak Sevak
- ಒಟ್ಟು ಹುದ್ದೆಗಳು: 28,740
- ಉದ್ಯೋಗ ಸ್ಥಳ: All India
ರಾಜ್ಯವಾರು ಅಂಚೆ ಇಲಾಖೆ ಹುದ್ದೆಗಳ ವಿವರ:
| ರಾಜ್ಯಗಳ ಹೆಸರು | ಹುದ್ದೆಗಳ ಸಂಖ್ಯೆ |
| ಉತ್ತರ ಪ್ರದೇಶ | 3004 |
| ತಮಿಳುನಾಡು | 2292 |
| ಮಹಾರಾಷ್ಟ್ರ | 1498 |
| ಕೇರಳ | 1385 |
| ಮಧ್ಯಪ್ರದೇಶ | 1314 |
| ಈಶಾನ್ಯ ರಾಜ್ಯಗಳು (North East) | 1260 |
| ಆಂಧ್ರ ಪ್ರದೇಶ | 1215 |
| ಗುಜರಾತ್ | 1203 |
| ಕರ್ನಾಟಕ | 1135 |
| ಒಡಿಶಾ | 1101 |
| ಪಶ್ಚಿಮ ಬಂಗಾಳ | 923 |
| ಜಾರ್ಖಂಡ್ | 822 |
| ಬಿಹಾರ | 783 |
| ಅಸ್ಸಾಂ | 655 |
| ಛತ್ತೀಸ್‌ಗಢ | 638 |
| ಉತ್ತರಾಖಂಡ | 568 |
| ತೆಲಂಗಾಣ | 519 |
| ಪಂಜಾಬ್ | 400 |
| ಹಿಮಾಚಲ ಪ್ರದೇಶ | 331 |
| ಜಮ್ಮು ಮತ್ತು ಕಾಶ್ಮೀರ | 255 |
| ಹರಿಯಾಣ | 82 |
| ದೆಹಲಿ | 30 |
| ಒಟ್ಟು ಹುದ್ದೆಗಳು | 28,740 |
ಅಂಚೆ ಇಲಾಖೆ ವೇತನ ಶ್ರೇಣಿ:
- Branch Postmaster – BPM: ₹12,000 – ₹29,380/-
- Assistant Branch Postmaster – ABPM: ₹10,000 – ₹24,470/-
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC/Matriculation) ಉತ್ತೀರ್ಣರಾಗಿರಬೇಕು.
- ಗಣಿತ ಮತ್ತು ಇಂಗ್ಲಿಷ್ ವಿಷಯಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು.
- ಕಡ್ಡಾಯ: ಅಭ್ಯರ್ಥಿಯು ಸ್ಥಳೀಯ ಭಾಷೆಯನ್ನು (ಕರ್ನಾಟಕದಲ್ಲಿ ಕನ್ನಡ) ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.
- ಸೈಕಲ್ ಓಡಿಸಲು ತಿಳಿದಿರಬೇಕು (BPM/ABPM ಹುದ್ದೆಗಳಿಗೆ ಇದು ಅವಶ್ಯಕ).
ವಯೋಮಿತಿ:
- (ಅಧಿಸೂಚನೆ ದಿನಾಂಕಕ್ಕೆ ಅನ್ವಯವಾಗುವಂತೆ)
- ಕನಿಷ್ಠ ವಯಸ್ಸು: 18 ವರ್ಷಗಳು.
- ಗರಿಷ್ಠ ವಯಸ್ಸು: 40 ವರ್ಷಗಳು.
ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳು: 03 ವರ್ಷಗಳು.
- SC/ST ಅಭ್ಯರ್ಥಿಗಳು: 05 ವರ್ಷಗಳು.
- PwD (ಸಾಮಾನ್ಯ): 10 ವರ್ಷಗಳು.
- PwD (OBC): 13 ವರ್ಷಗಳು.
- PwD (SC/ST): 15 ವರ್ಷಗಳು.
ಅರ್ಜಿ ಶುಲ್ಕ:
- ಸಾಮಾನ್ಯ/OBC/EWS (ಪುರುಷ) ಅಭ್ಯರ್ಥಿಗಳಿಗೆ: ₹100/-
- ಎಲ್ಲಾ ಮಹಿಳಾ ಅಭ್ಯರ್ಥಿಗಳು: ಶುಲ್ಕವಿಲ್ಲ
- SC/ST/PwD/Transwomen ಅಭ್ಯರ್ಥಿಗಳು: ಶುಲ್ಕವಿಲ್ಲ
- ಪಾವತಿ ವಿಧಾನ: ಆನ್‌ಲೈನ್ (Credit/Debit Card, UPI, Net Banking).
ಪ್ರಮುಖ ದಿನಾಂಕಗಳು:
- ಆನ್‌ಲೈನ್ ನೋಂದಣಿ ಪ್ರಾರಂಭ ದಿನಾಂಕ: 31-01-2026
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-ಫೆಬ್ರವರಿ-2026.
- ತಿದ್ದುಪಡಿ (Correction) ವಿಂಡೋ: 18-02-2026 ರಿಂದ 19-02-2026 ರವರೆಗೆ.
ಪ್ರಮುಖ ಲಿಂಕ್‌ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: , indiapost.gov.inindiapostgdsonline.gov.in
ಇತರೆ ಮಾಹಿತಿಗಳನ್ನು ಓದಿ: