ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: 25ನೇ ಕಂತಿನ 2000 ರೂ. ಜಮಾ; ಕೂಡಲೇ Status ಚೆಕ್ ಮಾಡಿ!

Telegram Group Join Now
WhatsApp Group Join Now

ರಾಜ್ಯದ ಗೃಹಲಕ್ಷ್ಮಿ ಯೋಜನೆಯ (GruhaLakshmi Scheme) ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಮನೆಯೊಡತಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ 25ನೇ ಕಂತಿನ 2,000 ರೂಪಾಯಿ ಹಣ ಬಿಡುಗಡೆಯಾಗಿದ್ದು, ಈಗಾಗಲೇ ಫಲಾನುಭವಿಗಳ ಖಾತೆ ಸೇರಲಾರಂಭಿಸಿದೆ.

ಕಳೆದ ಕೆಲ ದಿನಗಳಿಂದ ತಾಂತ್ರಿಕ ಕಾರಣಗಳಿಂದಾಗಿ ಹಣ ಜಮೆ ಪ್ರಕ್ರಿಯೆ ಕೊಂಚ ವಿಳಂಬವಾಗಿತ್ತು. ಇದರಿಂದಾಗಿ ಮಹಿಳೆಯರಲ್ಲಿ ಸಹಜವಾಗಿಯೇ ಆತಂಕವಿತ್ತು. ಆದರೆ ಇದೀಗ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಹಿಳೆಯರ ಮೊಬೈಲ್‌ಗೆ ‘ಹಣ ಜಮೆಯಾದ’ (Credited) ಮೆಸೇಜ್‌ಗಳು ಬರುತ್ತಿದ್ದು, ಯಜಮಾನಿಯರ ಮೊಗದಲ್ಲಿ ಮಂದಹಾಸ ಮೂಡಿದೆ.

GruhaLakshmi Scheme ಹಣ ಚೆಕ್ ಮಾಡುವುದು ಹೇಗೆ?

ಸರ್ಕಾರ ಹಂತ ಹಂತವಾಗಿ ಡಿಬಿಟಿ (DBT) ಮೂಲಕ ಹಣ ಬಿಡುಗಡೆ ಮಾಡುತ್ತಿದ್ದು, ನಿಮ್ಮ ಖಾತೆ ಪರಿಶೀಲಿಸಿಕೊಳ್ಳಿ.

  • ಮೆಸೇಜ್ ಗಮನಿಸಿ: ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬಂದಿರುವ ಎಸ್‌ಎಂಎಸ್ (SMS) ಪರಿಶೀಲಿಸಿ.
  • ಬ್ಯಾಲೆನ್ಸ್ ಚೆಕ್: ಹತ್ತಿರದ ಎಟಿಎಂ ಅಥವಾ ಬ್ಯಾಂಕ್‌ಗೆ ಭೇಟಿ ನೀಡಿ ಖಾತೆ ಪರಿಶೀಲಿಸಿಕೊಳ್ಳಿ.
  • ಆತಂಕ ಬೇಡ: ಒಂದು ವೇಳೆ ಇನ್ನು ಹಣ ಬಂದಿಲ್ಲವೆಂದರೆ ಗಾಬರಿಯಾಗುವ ಅಗತ್ಯವಿಲ್ಲ. ಪ್ರಕ್ರಿಯೆ ಚಾಲನೆಯಲ್ಲಿದ್ದು, ಒಂದೆರಡು ದಿನಗಳಲ್ಲಿ ನಿಮ್ಮ ಖಾತೆಗೂ ಹಣ ಜಮೆಯಾಗಬಹುದು.

ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿರುವ ನಿಮ್ಮ ಅಕ್ಕ-ಪಕ್ಕದವರಿಗೂ ಈ ಮಾಹಿತಿಯನ್ನು ಈಗಲೇ ಶೇರ್ ಮಾಡಿ!

ರೈತರಿಗೆ ಗುಡ್ ನ್ಯೂಸ್: ಟಾರ್ಪಾಲಿನ್ ಖರೀದಿಗೆ ಶೇ.90ರಷ್ಟು ಸಹಾಯಧನ

ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ

Telegram Group Join Now
WhatsApp Group Join Now

Leave a Comment