ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC Recruitment 2026) ಬೀದರ್ ವಿಭಾಗದಲ್ಲಿ ಖಾಲಿ ಇರುವ ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ವಾಕ್-ಇನ್ ಸಂದರ್ಶನ (Walk-in Interview) ಕರೆಯಲಾಗಿದೆ.
ಬೀದರ್ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಹಕಾರ ಸಂಘದ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಒಟ್ಟು 78 ಚಾಲಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು.
ಎಲ್ಲೆಲ್ಲಿ ಖಾಲಿ ಇವೆ ಹುದ್ದೆಗಳು?:
ಬೀದರ್ ವಿಭಾಗದ ವ್ಯಾಪ್ತಿಗೆ ಬರುವ ಈ ಕೆಳಗಿನ ಘಟಕಗಳಲ್ಲಿ ಚಾಲಕರ ಕೊರತೆಯಿದ್ದು, ಆಯ್ಕೆಯಾದವರನ್ನು ಇಲ್ಲಿ ನಿಯೋಜಿಸಲಾಗುವುದು:
- ಬೀದರ್-1 ಮತ್ತು ಬೀದರ್-2 ಘಟಕಗಳು
- ಭಾಲ್ಕಿ, ಔರಾದ್
- ಬಸವಕಲ್ಯಾಣ ಮತ್ತು ಹುಮನಾಬಾದ್ ಘಟಕಗಳು.
ಹುದ್ದೆಗಳ ಲೆಕ್ಕಾಚಾರ (ಒಟ್ಟು 78):
ನೇಮಕಾತಿಯಲ್ಲಿ ಎರಡು ವಿಧಗಳಿದ್ದು, ಮೀಸಲಾತಿ ಅನ್ವಯ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ:
- ಹೊಸ ಹುದ್ದೆಗಳು: 56 (ಸಾಮಾನ್ಯ-16, SC-5, ST-3, ಪ್ರವರ್ಗ 2A-5 ಇತ್ಯಾದಿ).
- ಹಿಂಬಾಕಿ (Backlog) ಹುದ್ದೆಗಳು: 22 (ಪ್ರವರ್ಗ 2A-15, ಪ್ರವರ್ಗ 1-3, ಪ್ರವರ್ಗ 3A-4).
ಅರ್ಜಿ ಸಲ್ಲಿಸಲು ಅರ್ಹತೆಗಳೇನು?:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಲೈಸೆನ್ಸ್ ಇದ್ದರೆ ಸಾಲದು, ಈ ಕೆಳಗಿನ ನಿಖರ ಅರ್ಹತೆಗಳು ಕಡ್ಡಾಯ:
- ಶಿಕ್ಷಣ: ಎಸ್ಎಸ್ಎಲ್ಸಿ (SSLC) ಪಾಸಾಗಿರಬೇಕು.
- ಲೈಸೆನ್ಸ್: ಭಾರಿ ವಾಹನ ಚಾಲನಾ ಪರವಾನಗಿ (HTV License) ಮತ್ತು ಕರ್ನಾಟಕ ಬ್ಯಾಡ್ಜ್ ಹೊಂದಿರಬೇಕು. ಲೈಸೆನ್ಸ್ ಪಡೆದು ಕನಿಷ್ಠ 2 ವರ್ಷ ಆಗಿರಬೇಕು.
- ಅತ್ಯಂತ ಪ್ರಮುಖ ಅರ್ಹತೆ: ಅಭ್ಯರ್ಥಿಯು ಈಗಾಗಲೇ ಕೆಕೆಆರ್ಟಿಸಿ, ಕೆಎಸ್ಆರ್ಟಿಸಿ, ಬಿಎಂಟಿಸಿ ಅಥವಾ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ ನಡೆಸಲಾದ ‘ಗಣಕೀಕೃತ ಚಾಲನಾ ಪಥದ ಟ್ರ್ಯಾಕ್ ಟೆಸ್ಟ್’ನಲ್ಲಿ (Track Test) ಉತ್ತೀರ್ಣರಾಗಿರಬೇಕು. ಅದರ ದಾಖಲಾತಿ ಇದ್ದವರಿಗೆ ಮಾತ್ರ ಸಂದರ್ಶನಕ್ಕೆ ಅವಕಾಶವಿರುತ್ತದೆ.
ವಯೋಮಿತಿ:
- ಕನಿಷ್ಠ ವಯಸ್ಸು: 24 ವರ್ಷ ತುಂಬಿರಲೇಬೇಕು.
- ಗರಿಷ್ಠ ವಯಸ್ಸು:
- ಸಾಮಾನ್ಯ ವರ್ಗ: 35 ವರ್ಷ.
- 2A, 2B, 3A, 3B: 38 ವರ್ಷ.
- SC/ST ಮತ್ತು ಪ್ರವರ್ಗ-1: 40 ವರ್ಷ.
ಸಂದರ್ಶನ ಯಾವಾಗ? ಎಲ್ಲಿಗೆ ಹೋಗಬೇಕು?
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರವಾಗಿ ದಾಖಲೆ ಪರಿಶೀಲನೆ ಮತ್ತು ಸಂದರ್ಶನ ನಡೆಯಲಿದೆ.
- ದಿನಾಂಕ: ಫೆಬ್ರವರಿ 03, 2026 ಮತ್ತು ಫೆಬ್ರವರಿ 04, 2026.
- ಸಮಯ: ಬೆಳಿಗ್ಗೆ 12:00 ಗಂಟೆಯ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ತಡವಾಗಿ ಬರುವವರನ್ನು ಪರಿಗಣಿಸುವುದಿಲ್ಲ.
- ಸ್ಥಳ: ಕಕರಸಾ ನಿಗಮದ ಹಳೆ ಬಸ್ ನಿಲ್ದಾಣ, ಬೀದರ್ ವಿಭಾಗೀಯ ಕಚೇರಿ.
KKRTC Recruitment 2026 ಬೇಕಾಗುವ ದಾಖಲೆಗಳು:
ಸಂದರ್ಶನಕ್ಕೆ ಹೋಗುವಾಗ ಈ ಕೆಳಗಿನ ಮೂಲ ದಾಖಲೆಗಳು (Originals) ಮತ್ತು 2 ಸೆಟ್ ಜೆರಾಕ್ಸ್ ಹಾಗೂ 2 ಪಾಸ್ಪೋರ್ಟ್ ಅಳತೆಯ ಫೋಟೋ ತೆಗೆದುಕೊಂಡು ಹೋಗಿ:
- SSLC ಅಂಕಪಟ್ಟಿ.
- ಚಾಲನಾ ಪರವಾನಗಿ (HTV License) ಮತ್ತು ಬ್ಯಾಡ್ಜ್.
- ಟ್ರ್ಯಾಕ್ ಟೆಸ್ಟ್ ಪಾಸ್ ಆದ ಬಗ್ಗೆ ದಾಖಲೆ/ಅಂಕಪಟ್ಟಿ.
- ಆಧಾರ್ ಕಾರ್ಡ್.
- ಜಾತಿ ಪ್ರಮಾಣ ಪತ್ರ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪ್ರಕಟಣೆ: ಓದಿ
ಚಾಲಕ ವೃತ್ತಿಯಲ್ಲಿ ಆಸಕ್ತಿ ಇರುವ ನಿಮ್ಮ ಸ್ನೇಹಿತರಿಗೆ ಈ ಮಾಹಿತಿಯನ್ನು ಈಗಲೇ ಶೇರ್ ಮಾಡಿ!
ಇತರೆ ಮಾಹಿತಿಗಳನ್ನು ಓದಿ: