ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ನೀವೇನಾದರೂ ಎಸ್‌ಬಿಐ ಖಾತೆ ಹೊಂದಿದ್ದು, ಪದೇ ಪದೇ ಬೇರೆ ಬ್ಯಾಂಕ್‌ಗಳ ಎಟಿಎಂ (ATM) ಬಳಸುವ ಅಭ್ಯಾಸ ಇಟ್ಟುಕೊಂಡಿದ್ದರೆ ಇನ್ಮುಂದೆ ಎಚ್ಚರ ವಹಿಸಬೇಕು. ಏಕೆಂದರೆ, ಎಸ್‌ಬಿಐ ತನ್ನ ಎಟಿಎಂ ಸೇವಾ ಶುಲ್ಕಗಳಲ್ಲಿ ಏರಿಕೆ ಮಾಡಿದೆ.
ಈ ಹೊಸ ದರಗಳು ಡಿಸೆಂಬರ್ 1, 2025 ರಿಂದಲೇ ಜಾರಿಗೆ ಬಂದಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ. ಹಾಗಾದರೆ ಹೊಸ ದರಗಳೇನು? ಯಾರಿಗೆಲ್ಲಾ ಇದು ಅನ್ವಯವಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಎಷ್ಟು ಕಟ್ ಆಗುತ್ತೆ ದುಡ್ಡು? (SBI ATM Fee Hike)
ಎಸ್‌ಬಿಐ ಗ್ರಾಹಕರು ಇತರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ತಮಗಿರುವ ಉಚಿತ ಮಿತಿಯನ್ನು (Free Limit) ಮೀರಿದ ಬಳಿಕ ಮಾಡುವ ಪ್ರತಿಯೊಂದು ವಹಿವಾಟಿಗೆ ಇನ್ಮುಂದೆ ದುಬಾರಿ ಶುಲ್ಕ ತೆರಬೇಕಾಗುತ್ತದೆ.
- ನಗದು ಹಿಂಪಡೆಯುವಿಕೆ (Cash Withdrawal): ಹಿಂದೆ ₹21 ಇದ್ದ ಶುಲ್ಕವನ್ನು ₹23 + GST ಗೆ ಏರಿಕೆ ಮಾಡಲಾಗಿದೆ.
- ಹಣಕಾಸೇತರ ವಹಿವಾಟು (Non-Financial): ನೀವು ಕೇವಲ ಬ್ಯಾಲೆನ್ಸ್ ಚೆಕ್ (Balance Check) ಮಾಡಿದರೂ ಅಥವಾ ಮಿನಿ ಸ್ಟೇಟ್ಮೆಂಟ್ (Mini Statement) ಪಡೆದರೂ, ಅದಕ್ಕೆ ₹11 + GST ಪಾವತಿಸಬೇಕು (ಹಿಂದೆ ಇದು ₹10 ಇತ್ತು).
ಸಂಬಳ ಖಾತೆದಾರರಿಗೂ ಬರೆ:
ಇಲ್ಲಿಯವರೆಗೆ ಎಸ್‌ಬಿಐನಲ್ಲಿ ಸ್ಯಾಲರಿ ಅಕೌಂಟ್ (Salary Account) ಹೊಂದಿದ್ದವರಿಗೆ ‘ಅನ್ಲಿಮಿಟೆಡ್’ ಎಟಿಎಂ ವಹಿವಾಟು ಉಚಿತವಿತ್ತು. ಆದರೆ ಇನ್ಮುಂದೆ ಆ ಸೌಲಭ್ಯಕ್ಕೆ ಬ್ರೇಕ್ ಬಿದ್ದಿದೆ.
- ಹೊಸ ನಿಯಮ: ಸಂಬಳ ಖಾತೆದಾರರು ಇತರೆ ಬ್ಯಾಂಕ್ ಎಟಿಎಂಗಳಲ್ಲಿ ತಿಂಗಳಿಗೆ ಗರಿಷ್ಠ 10 ಉಚಿತ ವಹಿವಾಟುಗಳನ್ನು ಮಾತ್ರ ಮಾಡಬಹುದು.
- ಅದಾದ ಮೇಲೆ ಪ್ರತಿ ವಹಿವಾಟಿಗೆ ಸಾಮಾನ್ಯ ಖಾತೆದಾರರಂತೆಯೇ ಶುಲ್ಕ (₹23/₹11) ಅನ್ವಯವಾಗುತ್ತದೆ.
ಉಚಿತ ಮಿತಿ ಎಷ್ಟಿದೆ?:
ಸಾಮಾನ್ಯ ಉಳಿತಾಯ ಖಾತೆದಾರರಿಗೆ (Savings Account) ಉಚಿತ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
- ಬೇರೆ ಬ್ಯಾಂಕ್‌ಗಳ ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಉಚಿತವಾಗಿ ವಹಿವಾಟು ನಡೆಸಬಹುದು. (ಮೆಟ್ರೋ ಸಿಟಿ ಮತ್ತು ಇತರೆ ನಗರಗಳ ನಿಯಮ ಅನ್ವಯ).
- ಈ 5 ಬಾರಿ ಮುಗಿದ ನಂತರವೇ ಹೊಸ ಶುಲ್ಕ ಅನ್ವಯವಾಗುತ್ತದೆ.
ಯಾರಿಗೆ ಈ ರೂಲ್ಸ್ ಅನ್ವಯಿಸಲ್ಲ?
ಎಲ್ಲರಿಗೂ ಈ ಬಿಸಿ ಮುಟ್ಟುವುದಿಲ್ಲ. ಕೆಳಗಿನ ಗ್ರಾಹಕರಿಗೆ ಹಳೆಯ ನಿಯಮಗಳೇ ಮುಂದುವರಿಯಲಿವೆ:
- ಎಸ್‌ಬಿಐ ಎಟಿಎಂ ಬಳಕೆ: ನೀವು ಎಸ್‌ಬಿಐ ಕಾರ್ಡ್ ಬಳಸಿ, ಎಸ್‌ಬಿಐ ಎಟಿಎಂನಲ್ಲೇ ಹಣ ಡ್ರಾ ಮಾಡಿದರೆ ಯಾವುದೇ ಶುಲ್ಕವಿಲ್ಲ (ಉಚಿತ).
- BSBD ಖಾತೆಗಳು: ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆದಾರರಿಗೆ ದರ ಏರಿಕೆ ಅನ್ವಯಿಸಲ್ಲ.
- ಕಿಸಾನ್ ಕ್ರೆಡಿಟ್ ಕಾರ್ಡ್ (KCC): ರೈತರಿಗಾಗಿ ಇರುವ ಈ ಖಾತೆಗಳಿಗೂ ವಿನಾಯಿತಿ ನೀಡಲಾಗಿದೆ.
- ಕಾರ್ಡ್‌ಲೆಸ್ ವಿತ್‌ಡ್ರಾವಲ್: ಎಸ್‌ಬಿಐ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೆ (YONO ಆಪ್ ಮೂಲಕ) ಹಣ ತೆಗೆಯುವುದು ಉಚಿತ ಮತ್ತು ಅನಿಯಮಿತ.
ಸಲಹೆ: ಅನಗತ್ಯ ಶುಲ್ಕದಿಂದ ತಪ್ಪಿಸಿಕೊಳ್ಳಲು ಆದಷ್ಟು ಎಸ್‌ಬಿಐ ಎಟಿಎಂ ಅನ್ನೇ ಬಳಸಿ ಅಥವಾ YONO ಆಪ್ ಮೂಲಕ ‘ಕಾರ್ಡ್‌ಲೆಸ್ ಕ್ಯಾಶ್’ (Cardless Cash) ಸೌಲಭ್ಯ ಬಳಸಿ. ತಿಂಗಳಿಗೆ 5 ಬಾರಿಗಿಂತ ಹೆಚ್ಚು ಬೇರೆ ಎಟಿಎಂ ಬಳಸುವಾಗ ಎಚ್ಚರವಿರಲಿ!
ಇತರೆ ಮಾಹಿತಿಗಳನ್ನು ಓದಿ:
GruhaLakshmi Digital Marketing: ಗೃಹಿಣಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್!
ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ