ಜಾನುವಾರುಗಳ ಆರೋಗ್ಯ ಮತ್ತು ಹಾಲಿನ ಉತ್ಪಾದನೆ ರೈತರ ಆದಾಯದ ಮೂಲವಾಗಿದೆ. ಆದರೆ, ದುಬಾರಿ ಬೆಲೆಯ ಪಶು ಆಹಾರ (Cattle Feed) ಖರೀದಿಸುವುದು ರೈತರಿಗೆ ಹೊರೆಯಾಗುತ್ತಿದೆ. ಇದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಹೈನುಗಾರರ ನೆರವಿಗೆ ಧಾವಿಸಿದ್ದು, ‘ಮೇವಿನ ಕಿರು ಪೊಟ್ಟಣಗಳ ವಿತರಣೆ ಯೋಜನೆ’ಯನ್ನು (Fodder Mini-Kit Distribution Scheme) ಜಾರಿಗೆ ತಂದಿದೆ.
ಪಶುಸಂಗೋಪನಾ ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆಯಡಿ ರೈತರಿಗೆ ಸುಧಾರಿತ ತಳಿಯ ಮೇವಿನ ಬೀಜಗಳನ್ನು ಸಂಪೂರ್ಣ ‘ಉಚಿತವಾಗಿ’ ನೀಡಲಾಗುತ್ತದೆ. ಇದರಿಂದ ಮನೆಯಲ್ಲೇ ಪೌಷ್ಟಿಕ ಮೇವು ಬೆಳೆದು, ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ಏನಿದು ಮೇವಿನ ಕಿರು ಪೊಟ್ಟಣ ಯೋಜನೆ? ರೈತರಿಗೇನು ಲಾಭ?
ಹೈನುಗಾರರು ಹೊರಗಿನಿಂದ ಹಿಂಡಿ, ಬೂಸಾ ಖರೀದಿಸುವ ಬದಲು, ತಮ್ಮ ಜಮೀನಿನಲ್ಲೇ ಉತ್ತಮ ಗುಣಮಟ್ಟದ ಹಸಿರು ಮೇವು ಬೆಳೆಯಲು ಪ್ರೋತ್ಸಾಹಿಸುವುದೇ ಈ ಯೋಜನೆಯ ಉದ್ದೇಶ.
- ಉಚಿತ ಬೀಜ ವಿತರಣೆ: ಖಾರಿಫ್ (ಮುಂಗಾರು) ಮತ್ತು ರಬಿ (ಹಿಂಗಾರು) ಹಂಗಾಮಿಗೆ ತಕ್ಕಂತೆ ಆಫ್ರಿಕನ್ ಟಾಲ್ ಮೆಕ್ಕೆಜೋಳ, ಲುಸರ್ನ್ (ಕುದುರೆ ಮಸಾಲೆ), ಬರ್ಸೀಮ್, ಓಟ್ಸ್, ಚೈನೀಸ್ ಕ್ಯಾಬೇಜ್ ಮತ್ತು ಜೋಳದಂತಹ ಪೌಷ್ಟಿಕಾಂಶಯುಕ್ತ ಮೇವಿನ ಬೀಜಗಳ ಕಿಟ್ಗಳನ್ನು (1 ರಿಂದ 5 ಕೆಜಿ) ಉಚಿತವಾಗಿ ನೀಡಲಾಗುತ್ತದೆ.
- ಹಾಲಿನ ಇಳುವರಿ ಹೆಚ್ಚಳ: ಈ ಸುಧಾರಿತ ಮೇವನ್ನು ಜಾನುವಾರುಗಳಿಗೆ ತಿನ್ನಿಸುವುದರಿಂದ ಅವುಗಳ ಆರೋಗ್ಯ ಸುಧಾರಿಸಿ, ಹಾಲಿನ ಪ್ರಮಾಣ ಮತ್ತು ಗುಣಮಟ್ಟ (Fat & SNF) ಹೆಚ್ಚುತ್ತದೆ. ಇದರಿಂದ ರೈತರ ಆದಾಯವೂ ವೃದ್ಧಿಯಾಗುತ್ತದೆ.
ಮೀಸಲಾತಿ ಮತ್ತು ಆದ್ಯತೆ (Reservation):
ಸರ್ಕಾರ ಸಮಾಜದ ಎಲ್ಲಾ ವರ್ಗದವರಿಗೂ ಈ ಯೋಜನೆಯ ಲಾಭ ತಲುಪುವಂತೆ ನೋಡಿಕೊಳ್ಳಲು ಮೀಸಲಾತಿ ನಿಗದಿಪಡಿಸಿದೆ:
- ಮಹಿಳೆಯರು: ಒಟ್ಟು ಫಲಾನುಭವಿಗಳಲ್ಲಿ 30% ರಷ್ಟು ಬೀಜದ ಕಿಟ್ಗಳನ್ನು ಮಹಿಳಾ ರೈತರಿಗಾಗಿಯೇ ಮೀಸಲಿಡಲಾಗಿದೆ.
- ಪರಿಶಿಷ್ಟ ಜಾತಿ (SC): 16% ರಷ್ಟು ಮೀಸಲಾತಿ.
- ಪರಿಶಿಷ್ಟ ಪಂಗಡ (ST): 7% ರಷ್ಟು ಮೀಸಲಾತಿ.
- ಉಳಿದಂತೆ ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದ ರೈತರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಹತೆಗಳೇನು?
- ಅರ್ಜಿದಾರರು ಕರ್ನಾಟಕದ ರೈತರಾಗಿರಬೇಕು.
- ಮೇವು ಬೆಳೆಯಲು ತಮ್ಮ ಹೆಸರಿನಲ್ಲಿ ಕನಿಷ್ಠ ಪ್ರಮಾಣದ ಕೃಷಿ ಭೂಮಿ (Own Land) ಹೊಂದಿರಬೇಕು.
- ಕನಿಷ್ಠ 2 ಜಾನುವಾರುಗಳನ್ನು (ಹಸು/ಎಮ್ಮೆ) ಹೊಂದಿರುವವರಿಗೆ ಮೊದಲ ಆದ್ಯತೆ.
- ಒಮ್ಮೆ ಕಿಟ್ ಪಡೆದ ರೈತರು, ಮತ್ತೆ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಯಬೇಕು.
Fodder Mini-Kit Distribution Scheme 2026 ಅರ್ಜಿ ಸಲ್ಲಿಸುವುದು ಹೇಗೆ?
ಇದು ಆನ್ಲೈನ್ ಪ್ರಕ್ರಿಯೆಯಲ್ಲ. ರೈತರು ಖುದ್ದಾಗಿ ಹೋಗಿ ಅರ್ಜಿ ಸಲ್ಲಿಸಬೇಕು.
- ಭೇಟಿ ನೀಡಿ: ನಿಮ್ಮ ಹತ್ತಿರದ ಪಶು ಚಿಕಿತ್ಸಾಲಯ (Veterinary Hospital) ಅಥವಾ ತಾಲೂಕು ಪಶುಸಂಗೋಪನಾ ಇಲಾಖೆ ಕಚೇರಿಗೆ ಭೇಟಿ ನೀಡಿ.
- ಅರ್ಜಿ ನಮೂನೆ: ಅಲ್ಲಿ ‘ಮೇವಿನ ಕಿರು ಪೊಟ್ಟಣ’ ವಿತರಣೆ ಯೋಜನೆಯ ಫಾರ್ಮ್ ಪಡೆದು ಭರ್ತಿ ಮಾಡಿ.
- ದಾಖಲೆ ಸಲ್ಲಿಕೆ: ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಅಲ್ಲಿನ ಅಧಿಕಾರಿಗಳಿಗೆ ಸಲ್ಲಿಸಿ.
- ಪರಿಶೀಲನೆ: ಪಶುವೈದ್ಯಾಧಿಕಾರಿಗಳು ನಿಮ್ಮ ಜಮೀನು ಮತ್ತು ಜಾನುವಾರುಗಳನ್ನು ಪರಿಶೀಲಿಸಿ, ಅರ್ಹರಾಗಿದ್ದರೆ ಮೇವಿನ ಕಿಟ್ ವಿತರಿಸುತ್ತಾರೆ.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್.
- ಜಮೀನಿನ ಪಹಣಿ (RTC).
- ರೇಷನ್ ಕಾರ್ಡ್ (BPL ಇದ್ದರೆ ಉತ್ತಮ).
- ಬ್ಯಾಂಕ್ ಪಾಸ್ಬುಕ್.
- ಜಾತಿ ಪ್ರಮಾಣ ಪತ್ರ (SC/ST/OBC ಆಗಿದ್ದರೆ).
- ಇತ್ತೀಚಿನ ಫೋಟೋ.
ಸಹಾಯವಾಣಿ ಮತ್ತು ಸಂಪರ್ಕ: ಹೆಚ್ಚಿನ ಮಾಹಿತಿಗೆ ಇಲಾಖೆಯ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಬಹುದು ಅಥವಾ ವೆಬ್ಸೈಟ್ ahvs.kar.nic.in ಗೆ ಭೇಟಿ ನೀಡಬಹುದು.
ಇತರೆ ಮಾಹಿತಿಗಳನ್ನು ಓದಿ:
ಕುರಿ ಸಾಕಾಣಿಕೆಗೆ ಸರ್ಕಾರದಿಂದ ₹1.75 ಲಕ್ಷ ರೂ.: ₹43,750 ಉಚಿತ ಸಹಾಯಧನ
National Gokul Mission: ‘ರಾಷ್ಟ್ರೀಯ ಗೋಕುಲ ಮಿಷನ್’ನಿಂದ ₹2 ಕೋಟಿವರೆಗೆ ಸಬ್ಸಿಡಿ