Residential School Admission: ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ; ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

Telegram Group Join Now
WhatsApp Group Join Now

ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉಚಿತ ಊಟ ಮತ್ತು ವಸತಿ ಸೌಕರ್ಯ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ವಸತಿ ಶಾಲೆಗಳ ಪ್ರವೇಶಾತಿ ಪ್ರಕ್ರಿಯೆ (Residential School Admission) ಆರಂಭವಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಡಾ. ಎಪಿಜೆ ಅಬ್ದುಲ್ ಕಲಾಂ ಹಾಗೂ ಮುಸ್ಲಿಂ ವಸತಿ ಶಾಲೆಗಳಲ್ಲಿ 2026-27 ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 12,550 ಸೀಟುಗಳು ಲಭ್ಯವಿದ್ದು, ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಪೋಷಕರು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಯಾವ್ಯಾವ ಶಾಲೆಗಳಲ್ಲಿ ಪ್ರವೇಶ ಲಭ್ಯ?

ರಾಜ್ಯದಾದ್ಯಂತ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯಲ್ಲಿ ಬರುವ ಈ ಕೆಳಗಿನ ಶಾಲೆಗಳಿಗೆ ಅರ್ಜಿ ಕರೆಯಲಾಗಿದೆ:

  1. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು (ರಾಜ್ಯ ಪಠ್ಯಕ್ರಮ): 140 ಶಾಲೆಗಳು (10,460 ಸೀಟುಗಳು).
  2. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಗಳು (CBSE ಪಠ್ಯಕ್ರಮ): 29 ಶಾಲೆಗಳು (1,830 ಸೀಟುಗಳು).
  3. ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು (ರಾಜ್ಯ ಪಠ್ಯಕ್ರಮ): 04 ಶಾಲೆಗಳು (260 ಸೀಟುಗಳು).

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ವಿದ್ಯಾರ್ಥಿಯು ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
  • ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ₹2.5 ಲಕ್ಷ ಮಿತಿಯೊಳಗಿರಬೇಕು.
  • ಮೀಸಲಾತಿ: ಅಲ್ಪಸಂಖ್ಯಾತ ಸಮುದಾಯಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ) ಶೇ.75 ರಷ್ಟು ಮತ್ತು ಪರಿಶಿಷ್ಟ ಜಾತಿ/ಪಂಗಡ/ಹಿಂದುಳಿದ ವರ್ಗದವರಿಗೆ ಶೇ.25 ರಷ್ಟು ಸೀಟು ಮೀಸಲಿರುತ್ತದೆ. ಬಾಲಕಿಯರಿಗೆ ಶೇ.50 ರಷ್ಟು ಮೀಸಲಾತಿ ಇದೆ.

Residential School Admission 2026 ಅಗತ್ಯ ದಾಖಲೆಗಳು:

ಪೋಷಕರು ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧಿಟ್ಟುಕೊಳ್ಳಿ:

  1. ವಿದ್ಯಾರ್ಥಿಯ SATS (ಸಾಟ್ಸ್) ಐಡಿ ಸಂಖ್ಯೆ (ಶಾಲೆಯಲ್ಲಿ ಕೇಳಿದರೆ ಕೊಡುತ್ತಾರೆ).
  2. ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.
  3. ಪೋಷಕರ ಮೊಬೈಲ್ ಸಂಖ್ಯೆ.
  4. ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ (RD) ಸಂಖ್ಯೆ.
  5. ವಿಶೇಷ ವರ್ಗಗಳ ಮೀಸಲಾತಿ ಬಯಸುವ ಪ್ರಮಾಣ ಪತ್ರಗಳು (ಅನ್ವಯಿಸಿದರೆ).

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭ: ಜನವರಿ 07, 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 15, 2026
  • ಪ್ರವೇಶ ಪರೀಕ್ಷೆ ತಾತ್ಕಾಲಿಕ ದಿನಾಂಕ: ಮಾರ್ಚ್ 29, 2026 (ಭಾನುವಾರ).

Residential School Admission 2026 ಅರ್ಜಿ ಸಲ್ಲಿಸುವುದು ಎಲ್ಲಿ ಮತ್ತು ಹೇಗೆ?

ಅರ್ಜಿಗಳನ್ನು ಸೇವಾ ಸಿಂಧು (Seva Sindhu) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಬಹುದು ಅಥವಾ ನಿಮ್ಮ ಹತ್ತಿರದ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ/ವಸತಿ ಶಾಲೆಗಳನ್ನು ಸಂಪರ್ಕಿಸಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಕೊನೆಯ ದಿನಾಂಕದವರೆಗೆ ಕಾಯಬೇಡಿ. ಸರ್ವರ್ ಸಮಸ್ಯೆ ಎದುರಾಗುವ ಮುನ್ನವೇ ಇಂದೇ ನಿಮ್ಮ ಮಗುವಿನ ಅರ್ಜಿ ಸಲ್ಲಿಸಿ, ಉಚಿತ ಮತ್ತು ಗುಣಮಟ್ಟದ ಶಿಕ್ಷಣದ ಲಾಭ ಪಡೆಯಿರಿ.

ಪ್ರಮುಖ ಲಿಂಕ್‌ಗಳು:
Residential School Admission 2026 Online Application Link: Apply Online
ಅಧಿಕೃತ ವೆಬ್‌ಸೈಟ್:‌ sevasindhuservices.karnataka.gov.in, dom.karnataka.gov.in

Labour Card Scholarship 2026: ವಿದ್ಯಾರ್ಥಿಗಳಿಗೆ 60,000 ರೂ. ಶೈಕ್ಷಣಿಕ ಸಹಾಯಧನ

ಕಾರ್ಮಿಕರ ಮಕ್ಕಳಿಗೆ 20,000 ರೂ. ವಿದ್ಯಾರ್ಥಿವೇತನ; ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment