New Ration Card Karnataka: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ; ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

Telegram Group Join Now
WhatsApp Group Join Now

ಹೊಸದಾಗಿ ಪಡಿತರ ಚೀಟಿ (New Ration Card) ಪಡೆಯಲು ಕಾಯುತ್ತಿರುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ನೀವು ಕೂಡ ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾ? ಹಾಗಿದ್ದರೇ ಈ ಸುದ್ದಿ ಓದಿ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿ ಕಡ್ಡಾಯವಾಗಿ ಬೇಕೆ ಬೇಕು, ಆದ್ದರಿಂದ ರೇಷನ್ ಕಾರ್ಡ್‌ ಬೇಡಿಕೆ ಹೆಚ್ಚಾಗಿದೆ.

ಸರ್ಕಾರದಿಂದ ಜಾರಿಗೆ ತರಾಲಾಗಿರುವ ಯೋಜನೆಗಳಿಗೆ ಅರ್ಜಿ ಸಲ್ಲಿಸಲು BPL Ration Card, ಅಂತ್ಯೋದಯ ಪಡಿತರ ಚೀಟಿ ಬೇಕಾಗುತ್ತದೆ. ಅದಕ್ಕಾಗಿ ಅನೇಕ ಜನರು ಅರ್ಜಿ ಸಲ್ಲಿಸಲು ಕಾಯುತ್ತಿರುತ್ತಾರೆ.

New Ration Card Karnataka Application Online:

ಕೆಲವು ವಿಶೇಷ ವರ್ಗದ ಜನರಿಗೆ ಮತ್ತು ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಮಾತ್ರ ಅರ್ಜಿ ಸಲ್ಲಿಸಲು ಇಲಾಖೆ ಅವಕಾಶ ಕಲ್ಪಿಸಿದೆ. 2026 ರ ಮಾರ್ಚ್‌ವರೆಗೂ ಈ ವಿಶೇಷ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?: ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವಂತೆ, ಈ ಕೆಳಗಿನ ಮೂರು ವಿಭಾಗದವರು ಮಾತ್ರ ಈಗ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು:

1. ಈ-ಶ್ರಮ್ ಕಾರ್ಡ್ ಇದ್ದವರಿಗೆ (Special EShram): ಅಸಂಘಟಿತ ಕಾರ್ಮಿಕರು ಅಥವಾ ಇ-ಶ್ರಮ್ (eShram) ಕಾರ್ಡ್ ಹೊಂದಿರುವವರು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

  • ದಿನಾಂಕ: 04/10/2025 ರಿಂದ 31/03/2026 ರವರೆಗೆ.
  • ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮಾತ್ರ

2. PVTG (ಬುಡಕಟ್ಟು/ಅಲೆಮಾರಿ) ಸಮುದಾಯದವರಿಗೆ: ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ (PVTG) ಸೇರಿದ ಕುಟುಂಬಗಳು ಅರ್ಜಿ ಸಲ್ಲಿಸಬಹುದು.

  • ದಿನಾಂಕ: 04/10/2025 ರಿಂದ 31/03/2026 ರವರೆಗೆ.
  • ಸಮಯ: ಬೆಳಿಗ್ಗೆ 10 ರಿಂದ ಸಂಜೆ 05 ರವರೆಗೆ.

3. ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ (Medical Emergency): ಯಾರಾದರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬಿಪಿಎಲ್ ಕಾರ್ಡ್ ಮೂಲಕ ಚಿಕಿತ್ಸೆ ಪಡೆಯಬೇಕಾದ ತುರ್ತು ಪರಿಸ್ಥಿತಿ ಇದ್ದರೆ, ಅಂತಹವರು ‘ಮೆಡಿಕಲ್ ಎಮರ್ಜೆನ್ಸಿ’ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.

  • ದಿನಾಂಕ: 28/10/2025 ರಿಂದ 31/03/2026 ರವರೆಗೆ.
  • ಸಮಯ: ಬೆಳಿಗ್ಗೆ 10 ರಿಂದ ಸಂಜೆ 05 ರವರೆಗೆ.

ಅರ್ಜಿ ಸಲ್ಲಿಸುವುದು ಎಲ್ಲಿ? ಅರ್ಹರು ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು (ಆಧಾರ್, ಆದಾಯ ಪತ್ರ, ಮೆಡಿಕಲ್ ರಿಪೋರ್ಟ್ ಇತ್ಯಾದಿ) ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಸಾಮಾನ್ಯ ಜನರಿಗೆ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಇಲಾಖೆಯಿಂದ ಮುಂದಿನ ಆದೇಶದವರೆಗೆ ಕಾಯಬೇಕಿದೆ.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿಯಮಗಳ ಪ್ರಕಾರ, ಪ್ರಸ್ತುತ ಚಾಲ್ತಿಯಲ್ಲಿರುವ ಈ ಮೂರು ವಿಶೇಷ ವರ್ಗದವರು ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ.

ನೀವು ಅರ್ಜಿ ಸಲ್ಲಿಸಲು ‘ಕರ್ನಾಟಕ ಒನ್’ ಅಥವಾ ‘ಗ್ರಾಮ ಒನ್’ ಕೇಂದ್ರಗಳಿಗೆ ಹೋಗುವಾಗ ಈ ದಾಖಲೆಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ.

1. ಈ-ಶ್ರಮ್ ಕಾರ್ಡ್ ಇದ್ದವರಿಗೆ (Special EShram):

ಅಸಂಘಟಿತ ಕಾರ್ಮಿಕರು (ಕಟ್ಟಡ ಕಾರ್ಮಿಕರು, ಹೋಟೆಲ್ ಕೆಲಸಗಾರರು ಇತ್ಯಾದಿ) ಈ ವಿಭಾಗದಲ್ಲಿ ಬರುತ್ತಾರೆ.

  • ಈ-ಶ್ರಮ್ ಕಾರ್ಡ್ (e-Shram Card): 12 ಅಂಕಿಯ ಯುಎಎನ್ (UAN) ನಂಬರ್ ಇರುವ ಕಾರ್ಡ್ ಕಡ್ಡಾಯ.
  • ಆಧಾರ್ ಕಾರ್ಡ್: ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳು (ಮೊಬೈಲ್ ನಂಬರ್ ಲಿಂಕ್ ಆಗಿರಬೇಕು).
  • ಆದಾಯ ಪ್ರಮಾಣ ಪತ್ರ (Income Certificate): ತಹಶೀಲ್ದಾರ್ ಕಚೇರಿಯಿಂದ ಪಡೆದ ಚಾಲ್ತಿಯಲ್ಲಿರುವ ಆದಾಯ ಪತ್ರ.
  • ವಿಳಾಸದ ಪುರಾವೆ: ವೋಟರ್ ಐಡಿ / ಕರೆಂಟ್ ಬಿಲ್ / ಬಾಡಿಗೆ ಕರಾರು ಪತ್ರ.
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಮೊಬೈಲ್ ಸಂಖ್ಯೆ: ಓಟಿಪಿ (OTP) ಪಡೆಯಲು ಚಾಲ್ತಿಯಲ್ಲಿರುವ ಮೊಬೈಲ್.

2. PVTG (ಬುಡಕಟ್ಟು/ಅಲೆಮಾರಿ) ಸಮುದಾಯದವರಿಗೆ:

ಇದು ಕೊರಗ, ಜೇನು ಕುರುಬ ಸೇರಿದಂತೆ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ ಮೀಸಲಾದ ವಿಭಾಗವಾಗಿದೆ.

  • ಜಾತಿ ಪ್ರಮಾಣ ಪತ್ರ (Caste Certificate): ಅರ್ಜಿದಾರರು PVTG ಸಮುದಾಯಕ್ಕೆ ಸೇರಿದವರು ಎಂದು ದೃಢೀಕರಿಸುವ ತಹಶೀಲ್ದಾರ್ ನೀಡಿದ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್: ಅರ್ಜಿದಾರರ ಮತ್ತು ಕುಟುಂಬದವರ ಆಧಾರ್ ಕಾರ್ಡ್.
  • ಆದಾಯ ಪ್ರಮಾಣ ಪತ್ರ: ಕುಟುಂಬದ ವಾರ್ಷಿಕ ಆದಾಯ ಪತ್ರ.
  • ವಿಳಾಸದ ಪುರಾವೆ: ವಾಸಸ್ಥಳ ದೃಢೀಕರಣ ಅಥವಾ ಹಕ್ಕು ಪತ್ರ ಇದ್ದರೆ ಉತ್ತಮ.
  • ಭಾವಚಿತ್ರ: ಕುಟುಂಬದ ಮುಖ್ಯಸ್ಥರ ಫೋಟೋ.

3. ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ (Medical Emergency):

ತುರ್ತು ಚಿಕಿತ್ಸೆಗಾಗಿ ಬಿಪಿಎಲ್ (BPL) ಕಾರ್ಡ್ ಅವಶ್ಯಕತೆ ಇರುವವರು ಈ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ವೈದ್ಯಕೀಯ ದಾಖಲೆಗಳೇ ಮುಖ್ಯ.

  • ವೈದ್ಯಕೀಯ ಪ್ರಮಾಣ ಪತ್ರ (Medical Certificate): ರೋಗಿಯು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ಚಿಕಿತ್ಸೆಗಾಗಿ ರೇಷನ್ ಕಾರ್ಡ್ ಅಗತ್ಯವಿದೆ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿರುವ ದೃಢೀಕರಣ ಪತ್ರ.
  • ಆಸ್ಪತ್ರೆ ದಾಖಲೆಗಳು: ಡಿಸ್ಚಾರ್ಜ್ ಸಮ್ಮರಿ ಅಥವಾ ಚಿಕಿತ್ಸೆಯ ವರದಿಗಳು (Reports).
  • ಆದಾಯ ಪ್ರಮಾಣ ಪತ್ರ: ಚಿಕಿತ್ಸಾ ವೆಚ್ಚ ಭರಿಸಲು ಕುಟುಂಬಕ್ಕೆ ಆದಾಯ ಕಡಿಮೆ ಇದೆ ಎಂದು ತೋರಿಸುವ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್: ರೋಗಿ ಮತ್ತು ಕುಟುಂಬದವರ ಆಧಾರ್ ಕಾರ್ಡ್‌ಗಳು.
  • ವಿಳಾಸದ ಪುರಾವೆ ಮತ್ತು ಫೋಟೋ.

Karnataka New Ration Card Application Online Link:

ಅಧಿಕೃತ ಲಿಂಕ್: https://ahara.karnataka.gov.in/NRC/

KHB Online Application: ಬೆಂಗಳೂರಿನಲ್ಲಿ ಶೇ.50% ರಿಯಾಯಿತಿಯಲ್ಲಿ ಸರ್ಕಾರಿ ಸೈಟ್‌

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

ಮನೆಯಲ್ಲೇ ಕುಳಿತು ‘ಮ್ಯಾರೇಜ್ ಸರ್ಟಿಫಿಕೇಟ್’ಗೆ ಅರ್ಜಿ ಸಲ್ಲಿಸಿ & ಡೌನ್‌ಲೋಡ್‌ ಮಾಡಿಕೊಳ್ಳಿ

Telegram Group Join Now
WhatsApp Group Join Now

Leave a Comment