ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನ ವಿವಿಧ ವಿದ್ಯಾರ್ಥಿವೇತನಗಳಿಗೆ (Scholarship) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಸ್ಕಾಲರ್‌ಶಿಪ್ ಸೌಲಭ್ಯ ಪಡೆದುಕೊಳ್ಳಬಹುದು.
‘ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ’ (SSP) ಪೋರ್ಟಲ್‌ನಲ್ಲಿ ವಿವಿಧ ಇಲಾಖೆಗಳ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಲ್ಲಿ ಕೊನೆಯ ದಿನಾಂಕಗಳನ್ನು ಪ್ರಕಟಿಸಿದ್ದು, ವಿಶೇಷವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ದಿನಾಂಕವನ್ನು ವಿಸ್ತರಣೆ ಮಾಡಿದೆ.
SSP Karnataka Gov In Scholarship 2026 ಮಾಹಿತಿ:
ವಿವಿಧ ಇಲಾಖೆಗಳ ವಿದ್ಯಾರ್ಥಿವೇತನದ ವಿವರ ಮತ್ತು ಕೊನೆಯ ದಿನಾಂಕಗಳ ಮಾಹಿತಿ ಈ ಕೆಳಗಿನಂತಿದೆ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (OBC): ಹಿಂದುಳಿದ ವರ್ಗಗಳ (OBC) ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೋಷಕರು ಮತ್ತು ವಿದ್ಯಾರ್ಥಿಗಳ ಮನವಿಯ ಮೇರೆಗೆ ‘ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ’, ‘ವಿದ್ಯಾಸಿರಿ (ಊಟ ಮತ್ತು ವಸತಿ ಸಹಾಯ)’ ಹಾಗೂ ‘ಶುಲ್ಕ ಮರುಪಾವತಿ’ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದ್ದು, ದಿನಾಂಕ 15/02/2026 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆ (Social Welfare – SC): ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 28/02/2026 ರವರೆಗೆ ಕಾಲಾವಕಾಶವಿದೆ. ಆದರೆ, ವಿದ್ಯಾರ್ಥಿವೇತನ ಮಂಜೂರಾತಿಗಾಗಿ ವಿದ್ಯಾರ್ಥಿಗಳು ದಿನಾಂಕ 15.12.2025 ರ ಒಳಗಾಗಿ ಕಡ್ಡಾಯವಾಗಿ ಬಯೋಮೆಟ್ರಿಕ್ ಇ-ದೃಢೀಕರಣ ಮಾಡಿಸಬೇಕು. ಮೆಡಿಕಲ್/ಇಂಜಿನಿಯರಿಂಗ್ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾಸಿಕ ₹3,500 ವರೆಗೆ ನೆರವು ಸಿಗಲಿದೆ.
ಕಾರ್ಮಿಕ ಇಲಾಖೆ (Labour Department): ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ದಿನಾಂಕ 31/03/2026 ರ ಒಳಗಾಗಿ SSP ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು.
ಕಾಲೇಜು ಶಿಕ್ಷಣ ಇಲಾಖೆ (Collegiate Education): ಪದವಿ ಮತ್ತು ಸ್ನಾತಕೋತ್ತರ ಪದವಿ (Degree & PG) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಇಲಾಖೆಯಡಿ ಬರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 31/01/2026 ನ್ನು ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ. ಈ ಗಡುವು ಹತ್ತಿರವಿರುವುದರಿಂದ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ತಾಂತ್ರಿಕ ಶಿಕ್ಷಣ ಇಲಾಖೆ (Technical Education): ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ (Engineering) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ವಿಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕ 28/02/2026 ಅಂತಿಮ ದಿನವಾಗಿರುತ್ತದೆ.
ವಿಕಲಚೇತನರ ಕಲ್ಯಾಣ ಇಲಾಖೆ: ವಿಶೇಷ ಚೇತನ (ಅಂಗವಿಕಲ) ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ವಿಕಲಚೇತನರ ಕಲ್ಯಾಣ ಇಲಾಖೆಯು ವಿದ್ಯಾರ್ಥಿವೇತನ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ದಿನಾಂಕ 31/01/2026 ರ ಒಳಗಾಗಿ ತಮ್ಮ ಯುಡಿಐಡಿ (UDID) ಸಂಖ್ಯೆಯೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Minority): ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 31/01/2026 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಆಯುಷ್ (AYUSH) ಇಲಾಖೆ: ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (AYUSH) ವೈದ್ಯಕೀಯ ಕೋರ್ಸ್‌ಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಇಲಾಖೆಯಡಿ ಅರ್ಜಿ ಸಲ್ಲಿಸಬೇಕಿದ್ದು, ಇದಕ್ಕೆ ದಿನಾಂಕ 28/02/2026 ಕೊನೆಯ ದಿನಾಂಕವಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ (Medical Education): ಎಂಬಿಬಿಎಸ್ (MBBS), ಡೆಂಟಲ್ ಮತ್ತು ನರ್ಸಿಂಗ್ ಸೇರಿದಂತೆ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 31/03/2026 ರವರೆಗೆ ಕಾಲಾವಕಾಶ ನೀಡಲಾಗಿದೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ (Brahmin Board): ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಲಾಗುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ 28/02/2026 ಕೊನೆಯ ದಿನಾಂಕವಾಗಿದೆ.
SSP Karnataka Gov In Scholarship 2025-26 ಬೇಕಾಗುವ ದಾಖಲೆಗಳು:
- ವಿದ್ಯಾರ್ಥಿಯ ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಆಗಿರಬೇಕು).
- ಪೋಷಕರ ಆಧಾರ್ ಕಾರ್ಡ್ (ತಂದೆ ಮತ್ತು ತಾಯಿ).
- SATS ID: ಶಾಲಾ ವಿದ್ಯಾರ್ಥಿಗಳಿಗೆ (ಶಾಲೆಯಲ್ಲಿ ಕೇಳಿದರೆ ಕೊಡುತ್ತಾರೆ).
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (RD Number ಮುಖ್ಯ).
- ಬ್ಯಾಂಕ್ ಪಾಸ್‌ಬುಕ್: ವಿದ್ಯಾರ್ಥಿಯ ಬ್ಯಾಂಕ್ ಖಾತೆ ಆಧಾರ್‌ಗೆ ಸೀಡಿಂಗ್ (NPCI Map) ಆಗಿರಲೇಬೇಕು.
- ಶುಲ್ಕ ರಸೀದಿ (Fee Receipt): ಕಾಲೇಜು ವಿದ್ಯಾರ್ಥಿಗಳಿಗೆ.
- ಇ-ದೃಢೀಕರಣ (E-Attestation): ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ಫೀಸ್ ವಿವರಗಳನ್ನು ಕಾಲೇಜಿನಿಂದ ಇ-ದೃಢೀಕರಣ ಮಾಡಿಸಿಕೊಳ್ಳಬೇಕು.
- UDID Card: ಅಂಗವಿಕಲ ವಿದ್ಯಾರ್ಥಿಯಾಗಿದ್ದರೆ ಮಾತ್ರ.
ಪ್ರಮುಖ ಸೂಚನೆ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ಸ್ಕಾಲರ್‌ಶಿಪ್ ಹಣ ಜಮೆಯಾಗುವುದಿಲ್ಲ. ಆದ್ದರಿಂದ ಕೂಡಲೇ ಬ್ಯಾಂಕ್‌ಗೆ ಹೋಗಿ NPCI Mapping ಮಾಡಿಸಿಕೊಳ್ಳಿ.
ಅರ್ಜಿ ಎಲ್ಲಿ ಸಲ್ಲಿಸಬೇಕು? ಎಲ್ಲಾ ಇಲಾಖೆಯ ವಿದ್ಯಾರ್ಥಿವೇತನಕ್ಕೂ ಒಂದೇ ಕಡೆ ಅಂದರೆ SSP (State Scholarship Portal) ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
- ಹಂತ 1: ಅಧಿಕೃತ ವೆಬ್‌ಸೈಟ್ ssp.karnataka.gov.in ಗೆ ಭೇಟಿ ನೀಡಿ.
- ಹಂತ 2: Create Account ಮಾಡಿ, ಆಧಾರ್ ವಿವರ ನೀಡಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಪಡೆಯಿರಿ.
- ಹಂತ 3 (ಕಾಲೇಜು ವಿದ್ಯಾರ್ಥಿಗಳಿಗೆ): ssp.postmatric.karnataka.gov.in ಲಿಂಕ್ ಮೂಲಕ ಲಾಗಿನ್ ಆಗಿ.
- ಹಂತ 4: ಕೇಳಲಾದ ಶೈಕ್ಷಣಿಕ ವಿವರ, ಜಾತಿ ಮತ್ತು ಆದಾಯದ ವಿವರಗಳನ್ನು ಭರ್ತಿ ಮಾಡಿ ‘Submit’ ಕೊಡಿ.
Karnataka SSP Scholarship 2026 Last Date:
| ಇಲಾಖೆಯ ಹೆಸರು | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
| ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (OBC) | 15/02/2026 |
| ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (ST Welfare) | 15/02/2026 |
| ತಾಂತ್ರಿಕ ಶಿಕ್ಷಣ ಇಲಾಖೆ (Technical Education) | 28/02/2026 |
| ಆಯುಷ್ (AYUSH) ಇಲಾಖೆ | 28/02/2026 |
| ಬ್ರಾಹ್ಮಣ ಅಭಿವೃದ್ಧಿ ಮಂಡಳಿ (Brahmin Board) | 28/02/2026 |
| ಸಮಾಜ ಕಲ್ಯಾಣ ಇಲಾಖೆ (Social Welfare – SC) | 28/02/2026 |
| ಆರ್ಯ ವೈಶ್ಯ ಇಲಾಖೆ (Arya Vaishya) | 28/02/2026 |
| ವೈದ್ಯಕೀಯ ಶಿಕ್ಷಣ ಇಲಾಖೆ (Medical Education) | 31/03/2026 |
| ಕಾರ್ಮಿಕ ಇಲಾಖೆ (Labour Dept) | 31/03/2026 |
| ಕಾಲೇಜು ಶಿಕ್ಷಣ ಇಲಾಖೆ (Collegiate Education) | 31/01/2026 |
| ವಿಕಲಚೇತನರ ಕಲ್ಯಾಣ ಇಲಾಖೆ | 31/01/2026 |
| ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Minority) | 31/01/2026 |
ಪ್ರಮುಖ ಲಿಂಕ್ ಗಳು:
SSP Scholarship Online Application Link: Apply ಮಾಡಿ
ಅಧಿಕೃತ ವೆಬ್ ಸೈಟ್: ssp.karnataka.gov.in, ssp.postmatric.karnataka.gov.in
SSP Post-Matric Scholarship Online Application 2025-26 Link: Apply Online
ಹೆಚ್ಚಿನ ಮಾಹಿತಿಗಾಗಿ ಈ ಕೇಳಗಿನ ಸಹಾಯವಾಣಿಗಳಿಗೆ ಕರೆ ಮಾಡಬಹುದು.
| ಇಲಾಖೆಯ ಹೆಸರು (Department) | ಸಂಪರ್ಕ ಸಂಖ್ಯೆ (Contact Number) | ಇಮೇಲ್ ವಿಳಾಸ (Email) |
| ಸಾಮಾನ್ಯ ಸಹಾಯವಾಣಿ | 1902 | – |
| ಸಮಾಜ ಕಲ್ಯಾಣ ಇಲಾಖೆ (Social Welfare Dept) | 94823 00400 / 080-22634300 | swdcontrolroom@gmail.com |
| ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ (Tribal Welfare) | 90362 67776 080-22261789 / 1702 / 1703 / 1704 | – |
| ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ (Minority Welfare) | 82777 99990 | – |
| ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (Backward Classes Welfare) | 80507 70004 / 80507 70005 | – |
| ಕೃಷಿ ಇಲಾಖೆ (Department of Agriculture) | 1800-425-3553 | – |
| ಕುಟುಂಬ (Kutumba) | 080-22371030 | kutumbasupport@karnataka.gov.in |
ಇತರೆ ಮಾಹಿತಿಗಳನ್ನು ಓದಿ:
NSP Scholarship 2025-26: ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ