ಪಿಎಂ ಕಿಸಾನ್ ಯೋಜನೆಯ 21 ನೇ ಕಂತಿನ 2,000 ರೂ. ಹಣ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ, ನಿಮ್ಮ ಖಾತೆಗೆ ಬಂತಾ?

Telegram Group Join Now
WhatsApp Group Join Now

ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Yojana) ಯೋಜನೆಯ 21ನೇ ಕಂತಿನ 2,000 ರೂ. ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು (19-11-2025 ರಂದು) ಅಧಿಕೃತವಾಗಿ ರೈತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.

ಬುಧವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ಉದ್ಘಾಟಿಸಿದ ಸಂದರ್ಭದಲ್ಲಿ, ಈ ಕಂತಿನ ಹಣ ಬಿಡುಗಡೆಗೊಂಡಿದ್ದು ಸುಮಾರು 9 ಕೋಟಿ ರೈತರಿಗೆ ಒಟ್ಟಾರೆ 18,000 ಕೋಟಿಗೂ ಅಧಿಕ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ.

ರೈತರಿಗೆ ವರ್ಷಕ್ಕೆ 6,000 ರೂ. ನೆರವು:

  • ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ., ಒಟ್ಟು ವಾರ್ಷಿಕ 6,000 ರೂ. ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
  • ಆಗಸ್ಟ್‌ನಲ್ಲಿ ಬಿಡುಗಡೆಗೊಂಡ 20 ನೇ ಕಂತಿನಲ್ಲಿ 2.4 ಕೋಟಿ ಮಹಿಳಾ ರೈತರು ಸೇರಿದಂತೆ 9.7 ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನ ದೊರಕಿತ್ತು.

PM Kisan Yojana 21 ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ ಆಯಿತೇ? ಹೀಗೆ ಪರಿಶೀಲಿಸಿ

  1. PM-KISAN ವೆಬ್‌ಸೈಟ್‌ಗೆ ಹೋಗಿ: pmkisan.gov.in
  2. Farmers Corner ವಿಭಾಗದಲ್ಲಿ Beneficiary Status ಅಥವಾ Beneficiary List ಆಯ್ಕೆ ಮಾಡಿ
  3. ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿದರೆ ಪಟ್ಟಿ ಕಾಣಿಸುತ್ತದೆ
  4. ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಕಂತು ಜಮೆಯಾಗಿದೆ, ಜೊತೆಗೆ ಬ್ಯಾಂಕ್ ಎಸ್‌ಎಂಎಸ್ ಕೂಡ ಬರುತ್ತದೆ

ಕೆವೈಸಿ ಕಡ್ಡಾಯ:

OTP ಆಧಾರಿತ eKYC ಅನ್ನು ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಮೂಲಕ ಮಾಡಿಸಬಹುದು. ಯೋಜನೆಯ ಉದ್ದೇಶ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಕೃಷಿ ವೆಚ್ಚಗಳಿಗೆ ನೆರವಾಗುವುದು.

PM-Kisan ಯೋಜನೆಗೆ ಹೊಸದಾಗಿ ನೋಂದಣಿ ಮಾಡಬೇಕೇ?

1) ಅಧಿಕೃತ ವೆಬ್‌ಸೈಟ್:
pmkisan.gov.in ಗೆ ಭೇಟಿ ನೀಡಿ.

2) ‘Farmers Corner’ ವಿಭಾಗದೊಳಗೆ:
New Farmer Registration ಆಯ್ಕೆಮಾಡಿ.

ಅಲ್ಲಿ ನಿಮ್ಮ ಅಗತ್ಯ ವಿವರ ಮತ್ತು ದಾಖಲೆಗಳನ್ನು ನಮೂದಿಸಿ ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದು.

CIBIL Score: ಗುಡ್‌ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೆಯೂ ಸಾಲ ಪಡೆಯಬಹುದು: ಹಣಕಾಸು ಸಚಿವಾಲಯ

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now

Leave a Comment