ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶದಿಂದ ಪ್ಯಾನಾಸೋನಿಕ್ ಲೈಫ್ ಸೊಲ್ಯೂಷನ್ಸ್ ಇಂಡಿಯಾ (PLSIND) ‘Panasonic Ratti Chhatr Scholarship 2026-27’ ಕಾರ್ಯಕ್ರಮವನ್ನು ಪ್ರಕಟಿಸಿದೆ.
ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಕೇಳಗೆ ನೀಡಲಾಗಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೇಳ ಕಂಡಂತೆ ನೀಡಲಾಗಿರುವ ವಿವರಗಳನ್ನು ಓದಿ. ಅರ್ಜಿ ಭರ್ತಿ ಮಾಡುವ ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿರುವ ಅಂಶಗಳನ್ನು ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ.
ವಿದ್ಯಾರ್ಥಿವೇತನದ ಪ್ರಯೋಜನಗಳು:
- ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ರೂ. 70,250 ವಿದ್ಯಾರ್ಥಿವೇತನ ದೊರೆಯಲಿದೆ.
- ಈ ವಿದ್ಯಾರ್ಥಿವೇತನದ ಬೆಂಬಲವನ್ನು 2028 ರವರೆಗೆ ಒದಗಿಸಲಾಗುವುದು (ವಿಸ್ತರಣೆಯ ಸಾಧ್ಯತೆಯೂ ಇದೆ).
ದೇಶದ ಯಾವುದೇ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (IIT) ಪ್ರವೇಶ ಪಡೆದಿರುವ, ಕಡಿಮೆ ಆದಾಯದ ಕುಟುಂಬಗಳ ಮೊದಲ ವರ್ಷದ BE / B.Tech ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಪ್ರಮುಖ ಅರ್ಹತೆಗಳು
- ಶಿಕ್ಷಣ: 2026-27 ನೇ ಶೈಕ್ಷಣಿಕ ವರ್ಷದಲ್ಲಿ ಭಾರತದ ಯಾವುದೇ ಐಐಟಿಯಲ್ಲಿ (IIT) ಮೊದಲ ವರ್ಷದ ಬಿಇ/ಬಿ.ಟೆಕ್ (BE/B.Tech) ಕಾರ್ಯಕ್ರಮಕ್ಕೆ ಪ್ರವೇಶ ಪಡೆದಿರಬೇಕು.
- ಅಂಕಗಳು: 12 ನೇ ತರಗತಿಯನ್ನು ಕಡ್ಡಾಯವಾಗಿ 75% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ. 8,00,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- ವಿಶೇಷ ಆದ್ಯತೆ: ಅಂಗವಿಕಲ ವ್ಯಕ್ತಿಗಳ (PwD) ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು.
- ಸೂಚನೆ: Buddy4Study ಮತ್ತು ಪ್ಯಾನಾಸೋನಿಕ್ ಉದ್ಯೋಗಿಗಳ ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಈ ವಿದ್ಯಾರ್ಥಿವೇತನಕ್ಕೆ ಅರ್ಹರಾಗಲು ವಿದ್ಯಾರ್ಥಿಗಳು ಪ್ರವೇಶ ಪತ್ರ ಮತ್ತು ಮೊದಲ ಸೆಮಿಸ್ಟರ್ ಶುಲ್ಕ ರಶೀದಿಯನ್ನು ಹೊಂದಿರಲೇಬೇಕು.
Panasonic Ratti Chhatr Scholarship 2026 ಪ್ರಮುಖ ದಾಖಲೆಗಳು:
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳ ಸ್ಕ್ಯಾನ್ ಮಾಡಲಾದ ಪ್ರತಿಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯ:
- 12ನೇ ತರಗತಿಯ ಅಂಕಪಟ್ಟಿ (2025-26 ಬ್ಯಾಚ್).
- ಸರ್ಕಾರ ನೀಡಿದ ಗುರುತಿನ ಚೀಟಿ (ಆಧಾರ್ ಕಾರ್ಡ್ / ಮತದಾರರ ಗುರುತಿನ ಚೀಟಿ / ಚಾಲನಾ ಪರವಾನಗಿ / ಪ್ಯಾನ್ ಕಾರ್ಡ್).
- ಐಐಟಿಯಿಂದ (IIT) ಪಡೆದ ಪ್ರವೇಶ ಪತ್ರ (Admission Letter).
- ಮೊದಲ ಸೆಮಿಸ್ಟರ್‌ನ ಶುಲ್ಕ ಪಾವತಿಸಿದ ರಶೀದಿ.
- ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು.
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
- ಕುಟುಂಬದ ಆದಾಯದ ಪುರಾವೆ (ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು):
- ಸರ್ಕಾರಿ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ.
- ಆದಾಯ ತೆರಿಗೆ ರಿಟರ್ನ್ (ITR) ಹೇಳಿಕೆ.
- ಫಾರ್ಮ್ 16 (ಸಂಬಳ ಪಡೆಯುತ್ತಿದ್ದರೆ).
- ಕಳೆದ 3 ತಿಂಗಳ ಸಂಬಳ ಚೀಟಿಗಳು (Pay Slips).
ಅರ್ಜಿ ಸಲ್ಲಿಸುವುದು ಹೇಗೆ?
- Buddy4Study ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘Panasonic Ratti Chhatr Scholarship 2026-27’ ಪುಟವನ್ನು ತೆರೆಯಿರಿ.
- ಪೇಜ್‌ನಲ್ಲಿರುವ ‘Apply Now’ (ಈಗಲೇ ಅನ್ವಯಿಸು) ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್/ಮೊಬೈಲ್/ಜಿಮೇಲ್ ಖಾತೆಯೊಂದಿಗೆ Buddy4Study ನಲ್ಲಿ ಲಾಗಿನ್ ಅಥವಾ ರಿಜಿಸ್ಟರ್ (ನೋಂದಣಿ) ಆಗಿ.
- ವಿದ್ಯಾರ್ಥಿವೇತನದ ‘ಅರ್ಜಿ ನಮೂನೆ ಪುಟ’ (Application Form Page) ತೆರೆದ ನಂತರ ‘Start Application’ ಬಟನ್ ಕ್ಲಿಕ್ ಮಾಡಿ.
- ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ಮೇಲೆ ತಿಳಿಸಿದ ಎಲ್ಲಾ ಸಂಬಂಧಿತ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ‘ನಿಯಮಗಳು ಮತ್ತು ಷರತ್ತುಗಳನ್ನು’ ಒಪ್ಪಿಕೊಂಡು, ‘Preview’ (ಪೂರ್ವವೀಕ್ಷಣೆ) ಬಟನ್ ಮೇಲೆ ಕ್ಲಿಕ್ ಮಾಡಿ, ನೀವು ನೀಡಿದ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ.
- ಎಲ್ಲವೂ ಸರಿಯಾಗಿದ್ದರೆ, ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Submit’ (ಸಲ್ಲಿಸು) ಬಟನ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಆಗಸ್ಟ್ 2026
ಪ್ರಮುಖ ಲಿಂಕ್‌ಗಳು:
Panasonic Ratti Chhatr Scholarship 2026-27 Application Link: Apply Online
ಅಧಿಕೃತ ವೆಬ್‌ಸೈಟ್: www.buddy4study.com
ಈ ಕೇಳಗಿನ ಸುದ್ದಿಗಳನ್ನು ಓದಿ: